ಇಲ್ಲಿನ ಶ್ರೀಅಯ್ಯಪ್ಪಸ್ವಾಮಿ ಸೇವಾ ಸಮಿತಿವತಿಯಿಂದ ಅಯ್ಯಪ್ಪಸ್ವಾಮಿಯ ೨೩ ನೇ ವರ್ಷದ ಉತ್ಸವ ಸೋಮವಾರ ಸಂಜೆ ಪಟ್ಟಣದ ರಾಜಬೀದಿಗಳಲ್ಲಿ ವೈಭವಯುತವಾಗಿ ನಡೆಯಲಿದೆ.
ಉತ್ಸವದ ಅಂಗವಾಗಿ ಗ್ರಾಮದೇವತೆಗಳಾದ ದುರ್ಗಮ್ಮ,ಹುಳಿಯಾರಮ್ಮನವರನ್ನು ಅಯ್ಯಪ್ಪನ ಸನ್ನಿಧಾನದಲ್ಲಿಗೆ ಕರೆತಂದು ಪೂಜೆ ನಡೆಸಲಾಗುತ್ತದೆ. ಸಂಜೆ ೬ ಗಂಟೆಗೆ ವಿದ್ಯುದೀಪಾಲಂಕೃತ ಮಂಟಪದಲ್ಲಿ ಅಯ್ಯಪ್ಪಸ್ವಾಮಿ ಹಾಗೂ ಗ್ರಾಮದೇವತೆಗಳನ್ನು ಕುಳ್ಳಿರಿಸಿ ಉತ್ಸವ ಜರುಗಲಿದೆ. ಉತ್ಸವದಲ್ಲಿ ವೀರಗಾಸೆ ಕುಣಿತ, ಚಂಡೆವಾದ್ಯ, ಚಿಟ್ಟಿಮೇಳ ಸೇರಿದಂತೆ ವಿವಿಧ ಸಾಂಸ್ಕೃತಿಕಕಾರ್ಯಕ್ರಮಗಳ ಜೊತೆಗೆ ಮತಾಪು,ಮದ್ದುಗುಂಡಿನ ಪ್ರದರ್ಶನ ಹಾಗೂ ಅನ್ನಸಂತರ್ಪಣೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸುವಂತೆ ಗುರುಸ್ವಾಮಿಗಳಾದ ಗೋಪಾಲ್ ಸ್ವಾಮಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ