ಹುಳಿಯಾರು ಹೋಬಳಿ ಯಳನಡು ಹಾಗೂ ಸಿಂಗಾಪುರ ಗ್ರಾಮದ ಸುತ್ತಮುತ್ತ ಚಿರತೆಯೊಂದು ಓಡಾಡುತ್ತಿರುವುದು ಕಂಡುಬಂದಿದ್ದು ಇಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.
ಕಳೆದ ಹದಿನೈದು ದಿನಗಳ ಹಿಂದಷ್ಟೆ ಯಳನಡು ಸಮೀಪದ ಹಾರನಹಳ್ಳಿ ಕೆರೆಯಲ್ಲೊಂದು ಹೆಣ್ಣುಚಿರತೆ ಸಾವನಪ್ಪಿದ್ದು ಕಣ್ಮುಂದೆ ಇರುವ ಬೆನ್ನಲ್ಲೆ ಇದೀಗ ಮತ್ತೊಂದು ಚಿರತೆ ಕಾಣಿಸಿಕೊಂಡಿರುವುದು ಜನರು ತೋಟತುಡಿಕೆಗಳಿಗೆ ಹೋಗಲು ಭಯಪಡುವಂತಾಗಿದೆ. .ಮಂಗಳವಾರದಂದು ಸಿಂಗಾಪುರದ ರುದ್ರಯ್ಯ ಅವರ ತೋಟ ಹಾಗೂ ಯಳನಡುವಿನ ಸಿದ್ರಾಮಯ್ಯ ಅವರ ತೋಟದಲ್ಲಿ ಚಿರತೆ ಕಂಡುಬಂದಿದೆ. ಈ ಬಗ್ಗೆ ಆರಣ್ಯ ಇಲಾಖೆಯವರು ಶೀಘ್ರವೇ ಗಮನ ಮಾಡಿ ಚಿರತೆ ಹಿಡಿಯುವ ಕಾರ್ಯ ಮಾಡಬೇಕಿದೆ ಇಲ್ಲವಾದರೆ ಚಿರತೆಯಿಂದ ಮುಂದೇನಾದರೂ ತೊಂದರೆಯಾದರೆ ಇಲಾಖೆಯವರೇ ಹೊಣೆ ಹೊರಬೇಕಾಗುವುದಿದ್ದು, ಕೂಡಲೇ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ