ಮಹಮದ್ ಪೈಗಂಬರರ ಜನ್ಮದಿನದ ಸವಿನೆನಪಾಗಿ ಆಚರಿಸಲಾಗುವ ಈದ್-ಮೀಲಾದ್ ಹಬ್ಬವನ್ನು ಭಾನುವಾರದಂದು ಪಟ್ಟಣದ ಮುಸ್ಲಿಂ ಸಮುದಾಯದವರು ಸಂಭ್ರಮದಿಂದ ಆಚರಿಸಲಿದ್ದಾರೆ.
ಹಬ್ಬದ ಅಂಗವಾಗಿ ಭಾನುವಾರ ಬೆಳಿಗ್ಗೆ ಪಟ್ಟಣದ ಜಾಮೀಯಾ ಮಸೀದಿ,ನೂರಾನಿ ಮಸೀದಿ,ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಡೆಯಲಿದ್ದು, ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದ್ದು, ಸೋಮವಾರ ಮಧ್ಯಾಹ್ನ ಶಾದಿಮಹಲ್ ನಲ್ಲಿ ಸಾಮೂಹಿಕ ಔತಣಕೂಟ ಏರ್ಪಡಿಸಲಾಗಿದೆ. ಇದೇ ದಿನ ಸಂಜೆ ಉರ್ದು ಶಾಲಾ ಮೈದಾನದಲ್ಲಿ ಧರ್ಮಗುರು ಹಜರತ್ ಮಹಮದ್ ಇಸಾ ಮಿಸ್ಬಾಲಿ ಅವರಿಂದ ಮಹಮದ್ ಪೈಗಂಬರ್ ಅವರ ಜೀವನ ಚರಿತ್ರೆ ಕುರಿತ ವಿಶೇಷ ಪ್ರವಚನ ನಡೆಯಲಿರುವುದಾಗಿ ಮುತುವಲ್ಲಿ ಜಬೀಉಲ್ಲಾ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ